Monday, 31 August 2015

ಶ್ರೀಗೋಪಾಲಕೃಷ್ಣ ಹೈಸ್ಕೂಲ್ ನಲ್ಲಿ

ಓಣಂ ಹಬ್ಬದ ಆಚರಣೆ






 


Sunday, 16 August 2015

 ಶಾಲಾ ಪಾರ್ಲಿಮೆಂಟ್ ಚುನಾವಣೆ





2015-16ನೇ ಸಾಲಿನ ಶಾಲಾ ಪಾರ್ಲಿಮೆಂಟ್ ಚುನಾವಣೆ 13-08-2015ರಂದು ಶಾಲೆಯಲ್ಲಿ ಮತದಾನ ಯಂತ್ರದ ಸಹಾಯದಿಂದ ನಡೆಯಿತು.

Friday, 14 August 2015

69ನೇ ಸ್ವಾತಂತ್ರ್ಯ ದಿನಾಚರಣೆ
ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ನಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.ಶಾಲಾ ಮ್ಯಾನೇಜರ್, ಮುಖ್ಯೋಪಾಧ್ಯಾಯಿನಿ,ವಾರ್ಡ್ ಮೆಂಬರ್, ಪಿ.ಟಿ.ಎ.ಅಧ್ಯಕ್ಷರು, ಎಂ.ಪಿ.ಟಿ.ಎ.ಅಧ್ಯಕ್ಷರು,ಹಾಗೂ ಪಿ.ಟಿ.ಎ.ಯ ಇತರ ಸದಸ್ಯರು,ಸ್ಕೂಲ್ ಸಪೋರ್ಟಿಂಗ್ ಗ್ರೂಪ್ ನ ಸದಸ್ಯರು,ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೋಹಿನಿ ರಾವ್ ಧ್ವಜಾರೋಹಣ ಮಾಡಿದರು.ಪಿ.ಟಿ.ಎ.ಅಧ್ಯಕ್ಷರಾದ ಗಣೇಶ್ ಪಾರಕಟ್ಟ ಮಾತನಾಡಿ ದೇಶದ ಏಳಿಗೆಗಾಗಿ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶಭಕ್ತಿ ಗೀತೆ, ವಂದೇಮಾತರಂ ಸ್ವರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.

 

Monday, 13 July 2015

ಕೂಡ್ಲು ಗೋಪಾಲಕೃಷ್ಣ ಹೈಸ್ಕೂಲ್ ನಲ್ಲಿ 
ಶಾಲಾ ಇಕೋ ಕ್ಲಬ್
 ಮತ್ತು 
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ
 ಪರಿಸರ ದಿನಾಚರಣೆ







Thursday, 9 July 2015

ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

    ರಕ್ಷಕ ಶಿಕ್ಷಕ ಸಂಘದ ಮಹಾಸಭೆ
    ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ 2015-2016 ಸಾಲಿನ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ದಿನಾಂಕ 03/07/2015 ಶುಕ್ರವಾರದಂದು ನಡೆಯಿತು. ಮಕ್ಕಳ ರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ವರ್ಷವೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಯುತ ಗಣೇಶ ಪಾರೆಕಟ್ಟ ಅವರನ್ನು, ಉಪಾಧ್ಯಕ್ಷರಾಗಿ ಶ್ರೀಯುತ ಶಿವಪ್ರಸಾದ್ ಅವರನ್ನೂ ಆರಿಸಲಾಯಿತು.
           ಮಾತೃ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಯಶೋದಾ ಮತ್ತು ಉಪಾಧ್ಯಕ್ಷೆಯಾಗಿ ಶ್ರೀಮತಿ ಸವಿತಾ  ಅವರನ್ನೂ ಆರಿಸಲಾಯಿತು. ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಗೋಪಾಲಕೃಷ್ಣ ಶ್ಯಾನುಭೋಗ್, ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಮೋಹಿನಿ ರಾವ್ ಉಪಸ್ಥಿತರಿದ್ದು,"ಶಾಲೆಯ ಅಭಿವೃದ್ಧಿಯಲ್ಲಿ ಕೇವಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮಾತ್ರವಲ್ಲದೆ ಜೊತೆಯಲ್ಲಿ ಹೆತ್ತವರ ಹಾಗೂ ಸಮಾಜದ ಪಾಲು ಹೆಚ್ಚಿದೆ.ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಶಾಲೆಯ ಮತ್ತು ಮಕ್ಕಳ ಅಭಿವೃದ್ಧಿಗೆ ಪ್ರಯತ್ನಿಸಬೇಕು"ಎಂದರು.ಶಾಲೆಯ ಎಲ್ಲಾ ಅಧ್ಯಾಪಕರೂ, ನೌಕರ ವೃಂದದವರೂ ಸಭೆಯಲ್ಲಿ ಹಾಜರಿದ್ದರು.


         

Saturday, 27 December 2014