Friday, 22 August 2014

ಸಂಭ್ರಮದ ಸ್ವಾತಂತ್ರ್ಯೋತ್ಸವ

೬೮ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಸಮಯದಲ್ಲಿ ಕೂಡ್ಲು ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಧ್ವಜಾರೋಹಣಗೈದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಮಾತೃ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಉಪಸ್ಥಿತರಿದ್ದರು.ಕವಿತಾ ರಚನೆ,ರಸಪ್ರಶ್ನೆ, ಮೊದಲಾದಸ್ವರ್ಧೆಗಳನ್ನು ನಡೆಸಿದ್ದು ಅದಕ್ಕಿರುವ ಬಹುಮಾನವನ್ನು ವಿತರಿಸಲಾಯಿತು.ರಾಜ್ಯ ಪುರಸ್ಕಾರ ಮತ್ತು ರಾಷ್ಟ್ರಪತಿ ಪುರಸ್ಕಾರ ಪಡೆದ ಸ್ಕೌಟು ಮತ್ತು ಗೈಡುಗಳನ್ನು ಪುರಸ್ಕರಿಸಲಾಯಿತು.ರಕ್ಷಕ ಶಿಕ್ಷಕ ಮತ್ತು ಮಾತೃ ಸಂಘದ ಸದಸ್ಯರು ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ವಿತರಿಸಿದರು.ನಂತರ ದೇಶಭಕ್ತಿಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು.

No comments:

Post a Comment